ಸರ್ ರಿಚರ್ಡ್ ಆರ್ಕ್‍ರೈಟ್(23 ಡಿಸೆಂಬರ್ 1732–3 ಆಗಸ್ಟ್ 1792) ಇಂಗ್ಲೆಂಡಿನ ತಂತ್ರಜ್ಞ, ಯಂತ್ರ-ಸಂಶೋಧಕ. ೧೩ ಮಕ್ಕಳಲ್ಲಿ ಈತನೇ ಕಿರಿಯವ. ಚಿಕ್ಕ ವಯಸ್ಸಿನಲ್ಲಿ ಕ್ಷೌರಿಕ ವೃತ್ತಿಯನ್ನು ಈತನಿಗೆ ಕಲಿಸಿತಾದರೂ ತನ್ನ ೩೫ ನೆಯ ವಯಸ್ಸಿನಲ್ಲಿ ಇದನ್ನು ತೊರೆದು ನೂಲುವ ಕೆಲಸದಲ್ಲಿ ತನ್ನ ಆಸಕ್ತಿಯನ್ನು ತೋರಿದ. ನೇಯುವ ಚೌಕಟ್ಟನ್ನು ಕಂಡುಹಿಡಿದು (೧೭೬೯), ಹಾರ್ ಗ್ರೀವ್ಸ್ ನ ನೇಯುವ ಯಂತ್ರವನ್ನು ಅಭಿವೃದ್ಧಿಗೊಳಿಸಿದ. ಇದರಿಂದಾಗಿ ಒಂದೇ ಸಲಕ್ಕೆ ಅಧಿಕ ಸಂಖ್ಯೆಯ ದಾರದ ಎಳೆಗಳನ್ನು ಉಪಯೋಗಿಸುವುದು ಸಾಧ್ಯವಾಯಿತು. ಈ ನೇಯುವ ಯಂತ್ರದ ವಿರುದ್ಧ ಆದ ಇತರ ನೇಕಾರರ ಅಸಹಕಾರ, ಮೊದಲಾದ ಗೊಂದಲಗಳಿಂದಾಗಿ, ಈತ ಲಂಕಾಶೈರ್ ತ್ಯಜಿಸಿ ನಾಟಿಂಗ್ಹ್ಯಾಂಗೆ ಬಂದು ಸೇರಿದ. ಈತ ರಚಿಸಿದ ಈ ಯಂತ್ರದ ಬಳಕೆಯ ಬಗ್ಗೆ ಅನೇಕ ತೊಂದರೆಗಳನ್ನು ಅನುಭವಿಸಿ, ತಯಾರಿಕಾ ಸ್ವಾಮ್ಯದ ಬಗ್ಗೆ ಹಲವಾರು ಮೊಕದ್ದಮೆಗಳನ್ನೆದುರಿಸಿಯೂ, ಶ್ರೀಮಂತನಾಗಿ ಬಾಳಿದ. == ಬಾಹ್ಯ ಸಂಪರ್ಕಗಳು == ", " . Encyclopædia (11th .). 1911. {{ }}: : |= |HIDE_PARAMETER= () 1732–1792 2009-05-17 ವೇಬ್ಯಾಕ್ ಮೆಷಿನ್ ನಲ್ಲಿ. 2004-08-10 ವೇಬ್ಯಾಕ್ ಮೆಷಿನ್ ನಲ್ಲಿ. 2006-03-08 ವೇಬ್ಯಾಕ್ ಮೆಷಿನ್ ನಲ್ಲಿ. ' /, 2009-02-07 ವೇಬ್ಯಾಕ್ ಮೆಷಿನ್ ನಲ್ಲಿ. 2009-02-08 ವೇಬ್ಯಾಕ್ ಮೆಷಿನ್ ನಲ್ಲಿ. – 1792 2011-07-09 ವೇಬ್ಯಾಕ್ ಮೆಷಿನ್ ನಲ್ಲಿ. – . .